ಅಂಗಸಂಯೋಗ/ಸಮ್ಮಿತಿ ಪ್ರಾಣಿಗಳಲ್ಲಿ ಜ್ಯಾಮಿತಿ

ಒಂದು ರಚನೆಗಳಲ್ಲಿ ಗುಣ, ಲಕ್ಷಣಗಳು ಕ್ರಮಬದ್ಧವಾಗಿದ್ದರೆ ಅಲ್ಲಿ ಸೌಂದರ್ಯ ತಾನೇ ತಾನಾಗಿ ಮೂಡುತ್ತದೆ. ಅಂತಹ ರಚನಾ ಕಲೆ, ಸಾಹಿತ್ಯ, ಸಂಗೀತ, ಶಿಲ್ಪ, ವಿಜ್ಞಾನ- ಹೀಗೆ ಯಾವುದೇ ಶಾಖೆಗೆ ಅನ್ವಯಿಸಬಹುದು. ಪ್ರಾಣಿಗಳಲ್ಲಿ ಅವುಗಳ ಅಂಗಗಳು ಕ್ರಮಬದ್ಧವಾಗಿ ಜೋಡಿಸಲ್ಪಟ್ಟಿರುತ್ತದೆ. ಅದನ್ನೇ ಅಂಗ ಸಂಯೋಗ (Sಥಿmmeಣಡಿಥಿ) ಎಂದು ಕರೆಯಬಹುದು. ' Sಥಿmmeಣಡಿಥಿ' ಪದ ಗ್ರೀಕ್ ಭಾಷೆಯಿಂದ ಉತ್ಪತ್ತಿಯಾಗಿ ಅದರ ಮೂಲ ಪದಗಳು Sಥಿಟಿ=ಣogeಣheಡಿ (ಸಂಯೋಗ) meಣಡಿoಟಿ=ಚಿ meಚಿsuಡಿe (ಪರಿಮಾಣ ಅಳೆಯುವುದು) ಎಂದಾಗುತ್ತದೆ. ಅಂಗಗಳ ಕ್ರಮಬದ್ಧ ಜೋಡಣೆ ಸೌಂದರ್ಯಕ್ಕೇ ಮೀಸಲಾಗದೇ ಅವುಗಳ ವಿಶೇಷ ಚಟುವಟಿಕೆ ಮತ್ತು ಕಾರ್ಯವಿಧಾನಕ್ಕೂ ಪೂರಕ ರಚನೆಯಾಗಿರುವುದನ್ನೂ ಕಾಣಬಹುದು.

 ಕೆಲವು ಜೀವಿಗಳಲ್ಲಿ ಸಮ್ಮಿತಿಯು ನಿರ್ದಿಷ್ಟವಾಗಿಲ್ಲ. ಇಂತಹ ಜೀವಿಗಳನ್ನು ಅಸಮ್ಮಿತ ಅಂಗಸಂಯೋಗಗಳು ಎನ್ನಬಹುದು. ಉದಾಹರಣೆಗೆ ಅಮೀಬಾ, ಅಮೀಬಾದಲ್ಲಿ ಜೀವದ್ರವ್ಯವು ಸದಾ ಬದಲಾಗುತ್ತಾ ರೂಪದಲ್ಲಿ ವ್ಯತ್ಯಯ ಉಂಟಾಗುವುದರಿಂದ ಒಂದು ನಿರ್ದಿಷ್ಟ ಆಕಾರವಿಲ್ಲ. ಹಾಗೆಯೇ ಶಂಖದ ಹುಳುಗಳಲ್ಲಿಯೂ, ಹೊರ ಕವಚವಾದ ಶಂಖವು ಸುರುಳಿ ಸುತ್ತಿಕೊಂಡಿರುವುದರಿಂದ ಅದರ ಮೃದುವಾದ ಒಳರಚನೆಯಲ್ಲಿಯೂ ಅಸಮ್ಮಿತಿ ಉಂಟಾಗಿರುವುದನ್ನೂ ಕಾಣಬಹುದು. 

 ಹೈಡ್ರಾ, ಅಂಬಲಿ ಮೀನು ಮುಂತಾದ ಕಟುಕ ಕಣವಂತ ಜೀವಿಗಳಲ್ಲಿ ಅಗ್ರ ಭಾಗದಿಂದ ಹಿಂಭಾಗದ ಅಕ್ಷದ ಯಾವುದೇ ಸಮತಲದಲ್ಲಿ ಉದ್ದವಾಗಿ ಸೀಳಿದರೂ, ದೇಹದ ಎರಡು ಭಾಗಗಳ ಕನ್ನಡೀ ಪ್ರತಿಬಿಂಬಗಳುಂಟಾಗುತ್ತವೆ. ಅಡ್ಡ ಕೊಯ್ತದ ಚಿತ್ರವನ್ನು ಗಮನಿಸಿದರೆ, ಜೀವಿಯ ಕೇಂದ್ರೀಯ ಅಕ್ಷದ ಸುತ್ತಲೂ ಸದೃಶ ಭಾಗಗಳು ಕ್ರಮಬದ್ಧ ವಿನ್ಯಾಸದಲ್ಲಿ ರೂಪುಗೊಂಡಿರುವುದನ್ನೂ ಕಾಣಬಹುದು. ಹಾಗಾಗಿ ಯಾವುದೇ ಸಮತಲದಲ್ಲಿ ಜೀವಿಯನ್ನು ಕತ್ತರಿಸಿದಾಗ ಎರಡು ಸಮ್ಮಿತಿಯ ತುಂಡುಗಳನ್ನು ಪಡೆಯಬಹುದು. ಇದನ್ನು ತ್ರಿಜ್ಯ ಸಮ್ಮಿತಿ (ಖಚಿಜiಚಿಟ Sಥಿmmeಣಡಿಥಿ) ಎನ್ನುತ್ತೇವೆ. ಖಚಿಜius ಪದ ಲ್ಯಾಟಿನ್ ಭಾಷೆಯಿಂದ ಬಂದಿದ್ದು ಅದರ ಅರ್ಥ ಚಕ್ರದ ಸ್ಪೋಕ್ (sಠಿoಞe) ಎಂದಾಗುತ್ತದೆ. ಸೈಕಲ್ ಚಕ್ರದ ಅಡ್ಡ ಕಡ್ಡಿಗಳಂತೆ ಗೆರೆ ಎಳೆದ ಊಹೆ ಮಾಡಿದಲ್ಲಿ ತ್ರಿಜ್ಯ ಸಮ್ಮಿತಿಯನ್ನು ಅರ್ಥೈಸಬಹುದು. 

ಕಂಟಕಚರ್ಮಿಗಳಾದ ನಕ್ಷತ್ರ ಮೀನುಗಳಲ್ಲಿಯೂ ತ್ರಿಜ್ಯ ಸಮ್ಮಿತಿ ಕಾಣಬಹುದು. ಆದರೆ ಇಲ್ಲಿ ಪಂಚಭುಜ ತ್ರಿಜ್ಯಾಕೃತಿಯುಂಟಾಗಿದೆ. 

ಪ್ರಾಣಿ ಜಗತ್ತಿನ ಹೆಚ್ಚು ರಚನೆಗಳಲ್ಲಿ ದ್ವಿ ಪಾಶ್ರ್ವೀಯ ಸಮ್ಮಿತಿ (ಃiಟಚಿಣeಡಿಚಿಟ) ಕಂಡುಬರುತ್ತದೆ. ಚಿಟ್ಟೆ, ಮಣ್ಣುಹುಳು, ಲಾಡಿ ಹುಳುಗಳಂತಹ ಸಂದಿಪದಿ, ವಲಯವಂತಗಳು, ಚಪ್ಪಟೆಹುಳುಗಳಲ್ಲಿ ದೇಹದ ಹೊರ ಮತ್ತು ಒಳ ಅಂಗಗಳು ಎರಡು ಪಾಶ್ರ್ವಗಳಲ್ಲಿ ಎಂದರೆ ಎಡ ಮತ್ತು ಬಲಭಾಗಗಳಲ್ಲಿ ಸಮನಾಗಿ ಜೋಡಿಸಲಾಗಿದೆ. ಅಗ್ರ ಭಾಗದಿಂದ ಹಿಂಭಾಗದವರೆಗೂ  ಒಂದೇ ಒಂದು ಸಮತಲದಲ್ಲಿ ಕೊಯ್ದಾಗ ಎರಡು ಕನ್ನಡಿ ಪ್ರತಿಬಿಂಬಗಳನ್ನು ಪಡೆಯಬಹುದು.

ಕಶೇರುಕಗಳಾದ ಕಪ್ಪೆ, ಮಾನವ, ಮುಂತಾದ ಉದಾಹರಣೆಗಳಲ್ಲಿ ದ್ವಿ ಪಾಶ್ರ್ವೀಯ ಸಮ್ಮಿತಿ ಕಂಡು ಬಂದರೂ ಅದು ಹೊರನೋಟಕ್ಕೆ ಸರಿ ಎನ್ನಬಹುದು. ಆದರೆ ಕೆಲವೊಂದು ಒಳ ಅಂಗಗಳಿಂದ ಕನ್ನಡಿ ಪ್ರತಿಬಿಂಬಗಳಾಗುವುದು ಸಾಧ್ಯವಿಲ್ಲ. ಉದಾಹರಣೆಗೆ ಜಠರ, ಮತ್ತು ಹೃದಯಗಳು ದೇಹದ ಎಡಭಾಗಕ್ಕೆ ವಾಲಿದ್ದರೆ, ಪಿತ್ತಜನಕಾಂಗ ಬಲಭಾಗದಲ್ಲಿ ಅಡಕವಾಗಿದೆ. ಮಿದುಳಿನ ಭಾಗವೂ ಸಮಭಾಗಗಳಂತಿರದೆ ಎಡಪಾಶ್ರ್ವದ ಮಿದುಳು ಭಾಗ ಬಲ ಪಾಶ್ರ್ವಕ್ಕಿಂತ ಸ್ವಲ್ಪ ದೊಡ್ಡದಾಗಿರುವುದನ್ನು ಕಾಣಬಹುದು.

ತ್ರಿಜ್ಯ ಸಮ್ಮಿತಿ ಮತ್ತು ದ್ವಿ ಪಾಶ್ರ್ವೀಯ ಸಮ್ಮಿತಿಗಳ ನಡುವಣ ಸಮ್ಮಿತಿಗಳನ್ನು ಕೆಲವೊಂದು ಜೀವಿಗಳು ಪ್ರದರ್ಶಿಸುತ್ತವೆ. ಇವುಗಳಲ್ಲಿ ಒಂದು ಸಮತಲಕ್ಕಿಂತಲೂ ಹೆಚ್ಚಿನ ಕೊಯ್ತದಲ್ಲಿ ಎರಡು ಸಮಭಾಗಗಳನ್ನು ಪಡೆಯಬಹುದು ಆದರೆ ತ್ರಿಜ್ಯ ಸಮ್ಮಿತಿಯಂತೆ ಯಾವುದೇ ಸಮತಲದಲ್ಲಿ ಸಮಭಾಗವಾಗಿ ಕತ್ತರಿಸುವ ಸಾಧ್ಯತೆ ಇಲ್ಲ. ಉದಾ: ಕಡಲ ಕುಸುಮ.
ಸಮ್ಮಿತಿಗಳು ಇಡೀ ದೇಹರಚನೆಗೇ ಅಲ್ಲದೇ ಪರಮಾಣು ಹಂತದಲ್ಲಿಯೂ ಕಾಣಬಹುದು. ಇದಕ್ಕೊಂದು ಉತ್ತಮ ಉದಾಹರಣೆ ಡಿ.ಎನ್.ಎ. ಜೇಮ್ಸ್ ವಾಟ್ಸನ್ ಮತ್ತು ಫ್ರಾನ್ಸಿಸ್ ಕ್ರಿಕ್  ಆಓಂ  ವಿನ 3 ಆಯಾಮಗಳ ಮಾದರಿ ವಿವರಿಸಿದ್ದಾರೆ. ಎರಡು ಪಾಲಿ ನ್ಯೂಕ್ಲಿಯೇಟೈಡ್ ಸರಪಳಿಗಳು ಒಂದರ ಸುತ್ತ ಮತ್ತೊಂದು ಹೆಣೆದುಕೊಂಡು ಹೆಲಿಶ್ಸ್ ದ್ವಯ ರಚನೆಯುಂಟಾಗಿದೆ. ಈ ಎರಡು ಸುರುಳಿಗಳಲ್ಲಿ ರಂಜಕ ಮತ್ತು ಪೆಂಟೇಸ್ ಸಕ್ಕರೆಗಳು ಏಣಿಯ ಪಾಶ್ರ್ವ ದಿಂಡುಗಳಂತಿದ್ದರೆ, ಪ್ರತ್ಯಾಮ್ಲೀಯ ಭಾಗವು ಮೆಟ್ಟಿಲುಗಳಂತಿವೆ. ಹಾಗಾಗಿ ಇವು ಸಾಧಾರಣ ಏಣಿಯಂತಿಲ್ಲದೇ ಸುರುಳಿ ಸುತ್ತಿದ ಸೋಪಾನ (sಠಿiಡಿಚಿಟ sಣಚಿiಡಿಛಿಚಿse) ದಂತಿದೆ. 

 ಸುರುಳಿಯಾಕಾರದ ರಚನೆಯಿಂದ ಅಸಮ್ಮಿತಿ ಉಂಟಾಗಿರುವುದನ್ನು ಶಂಖುವಿನ ಒಳರಚನೆ ಹಾಗೂ ನಾಟಿಲಸ್ ಎಂಬ ಮತ್ತೊಂದು ಮೃದ್ವಂಗಿಯ ಹೊರ ಕವಚದಲ್ಲಿ ಕಾಣಬಹುದು. ನಾಟಿಲಸ್‍ನಲ್ಲಿ ಒಳಕಿವಿಯ ಕಾಕಿಯಾ ಅಥವಾ ಗಡಿಯಾರದ ಸ್ಪ್ರಿಂಗ್‍ನಂತೆ ಸುತ್ತಿದ ರಚನೆ ಇದೆ.  

 ಜೇನುನೊಣಗಳು ಕಟ್ಟುವ ಮೇಣದ ಗೂಡಿನಲ್ಲಿ ನಿರ್ದಿಷ್ಟ ಜ್ಯಾಮಿತಿ ಕಾಣಬಹುದು. ಅದು ಷಷ್ಟಭುಜಾಕೃತಿಯಾಗಿದೆ. ಈ ಆಕಾರದಲ್ಲಿನ ಗೂಡು ಧೃಡತೆಯೊಂದಿಗೆ ಮಿತವ್ಯಯದ ಮೇಣವನ್ನು ಬಳಸಲು ಸಹಕಾರಿಯಾಗಿದೆ.

 ಕೀಟಗಳು ಮತ್ತು ಕ್ರಸ್ಟ್ರೆಷಿಯಾ (ಏಡಿ, ಸಿಗಡಿ ಮುಂತಾದವು) ಗಳಲ್ಲಿ ಸಂಯುಕ್ತಾಕ್ಷಿಗಳಿವೆ. ಈ ಸಂಯುಕ್ತಾಕ್ಷಿಗಳು ಅನೇಕ ಸಣ್ಣ ಸಣ್ಣ ಒಮ್ಮಟೀಡಿಯಾ ಎಂಬ ಕಣ್ಣುಗಳಿಂದಾಗಿವೆ. ಈ ಒಮ್ಮ ಟೀಡಿಯಾಗಳ ಕಾರ್ನಿಯಾಗಳು ಷಷ್ಟಭುಜಾಕೃತಿಯಲ್ಲಿಯೇ ಅಚ್ಚುಕಟ್ಟಾಗಿ ಜೋಡಣೆಯಾಗಿರುವುದನ್ನು ಕಾಣಬಹುದು.

 ಹೀಗೆ ಪ್ರತಿಯೊಂದು ರಚನೆಯಲ್ಲಿ ಕ್ರಮಬದ್ಧತೆಯೊಂದಿಗೆ ಮಿತವ್ಯಯ ಹಾಗೂ ದೃಢತೆಯನ್ನು ಕಂಡುಕೊಳ್ಳುವ ಪ್ರಯತ್ನಗಳಾಗಿವೆ ಎಂಬುದು ಸ್ಪಷ್ಟ.

 